ಮೈಸೂರು ದಸರಾ ಇತಿಹಾಸದಲ್ಲೇ ಪ್ರಥಮ: ಸಿಎಂ ಪತ್ನಿಯಿಂದ ಪುಷ್ಪಾರ್ಚನೆಗೆ ಶಾಸಕ ಶ್ರೀವತ್ಸ ತೀವ್ರ ಆಕ್ಷೇಪ

1 ನಿಮಿಷ ಓದು · ನವೀಕರಿಸಲಾಗಿದೆ 10 ವೀಕ್ಷಣೆ
WhatsApp
ಮೈಸೂರು ದಸರಾ ಇತಿಹಾಸದಲ್ಲೇ ಪ್ರಥಮ: ಸಿಎಂ ಪತ್ನಿಯಿಂದ ಪುಷ್ಪಾರ್ಚನೆಗೆ ಶಾಸಕ ಶ್ರೀವತ್ಸ ತೀವ್ರ ಆಕ್ಷೇಪ

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿ ವೇಳೆಯಲ್ಲಿ ಮುಖ್ಯಮಂತ್ರಿಗಳ ಪತ್ನಿ ಚಾಮುಂಡೇಶ್ವರಿ ದೇವಿಯ ಅಂಬಾರಿಗೆ ಪುಷ್ಪಾರ್ಚನೆ ಮಾಡಿರುವುದು ಮೈಸೂರು ದಸರಾದ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿ ನಡೆದಿದ್ದು, ಇದು ಪ್ರೋಟೋಕಾಲ್ ಹಾಗೂ ಸಂಪ್ರದಾಯದ ಉಲ್ಲಂಘನೆ ಎಂದು ಶಾಸಕ ಶ್ರೀವತ್ಸ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಶಾಸಕ ಶ್ರೀವತ್ಸ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ದಸರಾ ಜಂಬೂಸವಾರಿಯ ಶುಭ ಮುಹೂರ್ತದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲು ನಿರ್ದಿಷ್ಟ ರಾಜಕೀಯ ಹಾಗೂ ಆಡಳಿತಾತ್ಮಕ ಶಿಷ್ಟಾಚಾರಗಳಿವೆ (Protocol). ದಶಕಗಳಿಂದಲೂ ಮುಖ್ಯಮಂತ್ರಿಗಳು, ರಾಜಮನೆತನದ ಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಮಾತ್ರ ವೇದಿಕೆಯಲ್ಲಿದ್ದು ಪುಷ್ಪಾರ್ಚನೆ ಸಲ್ಲಿಸುವ ಪರಂಪರೆ ಇದೆ. ಆದರೆ, ಈ ಬಾರಿ ಸಿಎಂ ಪತ್ನಿ ವೇದಿಕೆ ಏರಿ ಪುಷ್ಪಾರ್ಚನೆ ಮಾಡಿರುವುದು ಇತಿಹಾಸದಲ್ಲೇ ಅಭೂತಪೂರ್ವ ಮತ್ತು ಅಸಂವಿಧಾನಿಕ ನಡೆಯಾಗಿದೆ. ಮೈಸೂರಿನ ಮಹಾರಾಣಿಯವರು ಕೂಡ ಪುಷ್ಪಾರ್ಚನೆ ಮಾಡಲು ವೇದಿಕೆ ಏರಿರಲಿಲ್ಲ ಇದು ಹೊಸತಾಗಿ ಇವರೇ ಸೃಷ್ಟಿಸಿಕೊಂಡ ಶಿಷ್ಟಾಚಾರ" ಎಂದು ಆರೋಪಿಸಿದರು.

ಮೈಸೂರು ದಸರಾದಲ್ಲಿ ಇಡೀ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಒಂದು ಸಚಿವರನ್ನು ತಡೆಯೋದು. ಮತ್ತೊಂದು ಕಡೆ ಪುಷ್ಪಾರ್ಚನೆಗೆ ಬೇರೆಯವರನ್ನು ಬಿಟ್ಟುಕೊಳ್ಳೋದು. ಡಿಜಿಪಿ ಸಲೀಂ ಕೆಳಗಡೆ ನಿಂತಿದ್ದಾರೆ. ಮೈಸೂರು ಕಮಿಷನರ್  ವೇದಿಕೆಯ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ.  ಮುಸ್ಲಿಂ ಅಂತ ಅವರನ್ನು ವೇದಿಕೆಗೆ ಬಿಡಲಿಲ್ಲವೇ ಇಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು